Loading the player...


INFO:
ಭಾರತ ಮತ್ತು ಪಾಕಿಸ್ತಾನದ ದಾಳಿಯ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳಲ್ಲಿ ಸೇನಾ ಕಾರ್ಯಾಚರಣೆಯ ಲೈವ್ ಮಾಹಿತಿ ನೀಡದಂತೆ ಈ ಹಿಂದೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದರಿಂದ ಬೇರೆ ದೇಶಗಳು ನಮ್ಮ ದೇಶದ ಕಾರ್ಯಾಚರಣೆಯ ಬಗ್ಗೆ ತಿಳಿಯುವ ಸಾಧ್ಯತೆ ಇರುತ್ತದೆ, ಸೈನಿಕರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ ಎಂದು ಸೂಚಿಸಲಾಗಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯ ಮಾಧ್ಯಮಗಳಿಗೆ ಮತ್ತೊಂದು ಆದೇಶ ಹೊರಡಿಸಿದ್ದು, ಟಿವಿ ಕಾರ್ಯಕ್ರಮಗಳಲ್ಲಿ ನಾಗರಿಕ ರಕ್ಷಣಾ ಸೈರನ್‌ಗಳ ಶಬ್ದಗಳನ್ನು ಬಳಸದಂತೆ ಆದೇಶಿಸಿದೆ.
ಟಿವಿ ಕಾರ್ಯಕ್ರಮದಲ್ಲಿ ವಾಯುದಾಳಿಯ ಸೈರನ್‌ ಶಬ್ದ ಬಳಸಬೇಡಿ; ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ - Kannada News | Government orders all media channels not to use air raid sirens sounds in programs | TV9 Kannada