Loading the player...


INFO:
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ತಡರಾತ್ರಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ, ಪಾಕ್ ಉಗ್ರರಿಗೆ ಬಿಸಿ ಮುಟ್ಟಿಸಿದೆ. ಹೌದು, ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಂಡದ್ದಕ್ಕೆ ಭಾರತವೇ ಸಂಭ್ರಮಿಸುತ್ತಿದೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಸುದ್ದಿನಿರೂಪಕಿ ಯೊಬ್ಬಳು, ಭಾರತವು ನಡೆಸಿದ ಆಪರೇಷನ್ ಸಿಂಧೂರ್ ಬಳಿಕ ಲೈವ್ ನಲ್ಲಿಯೇ ಪಾಕ್ ಸ್ಥಿತಿ ಹಾಗೂ ಪಾಕ್ ಜನರನ್ನು ನೆನೆದುಅಳಲು ಪ್ರಾರಂಭಿಸಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಪಾಕ್ ಜನರ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ - Kannada News | Pakistani news anchor gets emotional on live after India's Operation Sindoor attack, video goes viral  | TV9 Kannada