INFO:
ಎಲ್ಲೆಡೆ ಬರಗಾಲ, ಮಳೆಯಿಲ್ಲದೇ ರೈತರು ಬೆಳೆಬಾರದೇ ಬರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಹಿಂಗಾರು ಮಳೆಯಾಗದೇ ಬೆಳೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ. ಅದರೆ ಇದೇ ಬರಕ್ಕೆ ವಿಜಯಪುರ ನಗರದ ಕೃಷಿಕ ಸ್ನೇಹಿತರು ಸೆಡ್ಡು ಹೊಡೆದಿದ್ದಾರೆ. ಅವರೇ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ. ಮಳೆ ಬರಲಿ ಬಿಡಲಿ ನಾವಂತೂ ಒಳ್ಳೆ ಬೆಳೆ ಬೆಳೆಯೋಣಾ ಎಂದು ವಿಶೀಷ್ಟ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.
ಬರಗಾಲ ನಟ್ಟನಡುವೆ  2.5 ಕಿಮೀ ದೂರದಿಂದ ಡ್ರೈನೇಜ್ ನೀರು ಬಳಸಿ, 30 ಲಕ್ಷ ರೂ ಮೆಣಸಿನಕಾಯಿ ಬೆಳೆದು ಸೈ ಎನ್ನಿಸಿಕೊಂಡ ರೈತ! - Kannada News | In the midst of drought, a farmer grew rupees 30 lakhs worth of chillies by using drainage water from a distance of 2.5 km in Vijayapura | TV9 Kannada