INFO:
ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ಕಾಲು ಕೆರೆದು ದಾಳಿ ನಡೆಸುತ್ತಲೇ ಇದೆ. ನಿನ್ನೆ ಪಾಕಿಸ್ತಾನ ಭಾರತದ 36 ಕಡೆಗಳಲ್ಲಿ 300ರಿಂದ 400 ಡ್ರೋನ್​ಗಳ ಮೂಲಕ ದಾಳಿ ನಡೆಸಲು ಯತ್ನಿಸಿತ್ತು. ಆ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಅದಾದ ನಂತರ ಭಾರತ ಕೂಡ ಪಾಕಿಸ್ತಾನದೊಳಗೆ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಇಂದು ಮತ್ತೆ ಉರಿ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಮತ್ತೆ ಶಸ್ತ್ರಾಸ್ತ್ರ ಮತ್ತು ಫಿರಂಗಿ ಗುಂಡಿನ ದಾಳಿ ನಡೆಸಿದೆ. ಉರಿಯಲ್ಲಿ ಗುಂಡಿನ ದಾಳಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿದೆ. ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಉರಿ ಸೆಕ್ಟರ್‌ನಲ್ಲಿ ಶೆಲ್ ದಾಳಿ ಆರಂಭಿಸಿದೆ. ಇದರ ವಿಡಿಯೋವನ್ನು ಎಎನ್​ಐ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿ ಸೆಕ್ಟರ್​​ನಲ್ಲಿ ಗುಂಡಿನ ದಾಳಿ - Kannada News | Pakistan violates ceasefire again Pak resumes arms and artillery fire along the LOC in Uri sector | TV9 Kannada