INFO:
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಇಂಧನ ಕೊರತೆ ಭೀತಿ ಮೂಡಿದ ಹಿನ್ನೆಲೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನ ಮುಗಿಬಿದ್ದಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಒಟ್ಟು 4 ಪೆಟ್ರೋಲ್ ಬಂಕ್‌ಗಳಿವೆ. ಮೂರು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾದ ಹಿನ್ನೆಲೆ ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್‌ನಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತು ಇಂಧನ ಪಡೆದಿದ್ದಾರೆ.
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ! - Kannada News | Public runs to rippenpet Petrol bunk for fuel amidst Fuel Crisis | TV9 Kannada