Loading the player...


INFO:
2025ರಲ್ಲಿ ಉಂಟಾದ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಬಿಕ್ಕಟ್ಟಿನ ಸಮಯದಲ್ಲಿ ನಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ತಮ್ಮ ಹಳೆಯ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ದೇಶಗಳು ಯುದ್ಧವನ್ನು ನಿಲ್ಲಿಸದಿದ್ದರೆ ಅವರ ಮೇಲೆ ಶೇ. 200ರಷ್ಟು ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ. ಅದರಿಂದಲೇ ಎರಡೂ ದೇಶಗಳು ಕದನವಿರಾಮ ಘೋಷಿಸಿದವು ಎಂದು ಅವರು ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಲ್ಲು ಕಿರಿಯುತ್ತಾ ಎದ್ದು ನಿಂತರು. ಆದರೆ, ಅಮೆರಿಕ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಹಲವು ಬಾರಿ ಸ್ಪಷ್ಟನೆ ನೀಡಿದೆ.
ನಾನೇ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು; ಮತ್ತೆ ಹಳೇ ರಾಗ ಹಾಡಿದ ಟ್ರಂಪ್, ಶೆಹಬಾಜ್ ಷರೀಫ್ ಗಪ್​ಚುಪ್ - Kannada News | Donald Trump Says 11 Jets Shot Down During India Pakistan Conflict Praises PM Modi | TV9 Kannada