Loading the player...


INFO:
Unclaimed Deposit Refunds : ಹಕ್ಕುದಾರರು ಕ್ಲೈಮ್‌ ಮಾಡದ ಬ್ಯಾಂಕ್ ಠೇವಣಿಗಳು, ವಿಮೆ, ಮ್ಯೂಚುಯಲ್ ಫಂಡ್‌ಗಳು ಮತ್ತು ಪಿಂಚಣಿ ಖಾತೆಗಳನ್ನು ತ್ವರಿತವಾಗಿ ವಾರಸುದಾರರಿಗೆ ತಲುಪಿಸುವಂತೆ ಹಣಕಾಸು ಸಂಸ್ಥೆಗಳಿಗೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ. ಮಾರ್ಚ್ 2024 ರ ವೇಳೆಗೆ ಕ್ಲೈಮ್ ಮಾಡದ ಠೇವಣಿಗಳು 78,213 ಕೋಟಿ ರೂಪಾಯಿ ತಲುಪಿದ್ದು, ಜಿಲ್ಲಾ ಮಟ್ಟದ ಪ್ರಚಾರ ಶಿಬಿರಗಳ ಮೂಲಕ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕೆವೈಸಿ ವಿವರಗಳನ್ನು ಪರಿಷ್ಕರಿಸುವುದು ಮಾರ್ಗಸೂಚಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಡಿಜಿಟಲ್ ಸೇರ್ಪಡೆಯನ್ನು ಹೆಚ್ಚಿಸಲು ಮತ್ತು ಆಸ್ತಿ ಮರುಪಡೆಯುವಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಕ್ರಮ ಕೈಗೊಳ್ಳಲು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬ್ಯಾಂಕುಗಳಲ್ಲಿ ಕ್ಲೈಮ್ ಆಗದೇ ಉಳಿದ ಹಣ,ಬ್ಯಾಂಕುಗಳಲ್ಲಿ ಅನಾಥವಾಗಿದೆ 78 ಸಾವಿರ ಕೋಟಿ ರೂ.; ಹಕ್ಕುದಾರರಿಗೆ  ಠೇವಣಿ ಹಿಂದಿರುಗಿಸಲು ನಿರ್ಮಲಾ ಸೀತಾರಾಮನ್‌ ಸೂಚನೆ - fm nirmala sitharaman asks rbi sebi to return unclaimed deposits in banks - vijaykarnataka