Loading the player...


INFO:
"ನಾನು ಹೇಳಿದ್ದನ್ನೇ ಮಾಡುತ್ತೇನೆ, ಮಾಡುವುದನ್ನೇ ಹೇಳುತ್ತೇನೆ" ಎಂಬಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, "24 ಗಂಟೆಗಳಲ್ಲಿ ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸುತ್ತೇನೆ" ಎಂಬ ತಮ್ಮ ಹೇಳಿಕೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸಿರುವ ಡೊನಾಲ್ಡ್‌ ಟ್ರಂಪ್‌, ಈ ಮೂಲಕ ಭಾರತದ ಮೇಲೆ ಒಟ್ಟು ಶೇ. 50ರಷ್ಟು ಸುಂಕ ಜಡಿದಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ಈ ವಿಚಿತ್ರ ನಿರ್ಧಾರ,ಭಾರತ-ಅಮೆರಿಕ ನಡುವಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಯುಎಸ್‌ ಸುಂಕ,US Tariff: ಭಾರತದ ಮೇಲೆ ಶೇ. 50ರಷ್ಟು ಸುಂಕ ಜಡಿದ ಡೊನಾಲ್ಡ್‌ ಟ್ರಂಪ್‌; ಅದಕ್ಷ ಅಧ್ಯಕ್ಷನ ವಿಚಿತ್ರ ನಿರ್ಧಾರಗಳು! - us president donald trump imposes additional 25 per cent tariff on india - vijaykarnataka