Loading the player...


INFO:
‘ಆಪರೇಷನ್ ಸಿಂಧೂರʼ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸ್ಪಷ್ಟನೆ ಕೊಟ್ಟಿದ್ದು, ‘ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡಬೇಡೆʼ ಎಂದು ಮನವಿ ಮಾಡಿದ್ದಾರೆ. ಅನಿಸ್ ಉದ್ದೀನ್ ಎಂಬಾತನಿಂದ ‘ಎಕ್ಸ್‌ʼ ಖಾತೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ‌ ಆರ್‌ಎಸ್‌ಎಸ್‌ ಅಟ್ಯಾಕ್ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾನೆ.
ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯ ಸುಳ್ಳು ಸುದ್ದಿ,ನಿಜಕ್ಕೂ ಕರ್ನಲ್‌ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ದಾಳಿಯಾಯ್ತಾ? ಬೆಳಗಾವಿ ಪೊಲೀಸರ ಸ್ಪಷ್ಟನೆ ಏನು? - belagavi police confirmed social media reports of a attack on colonel sophia qureshi house are false - vijaykarnataka