Loading the player...


INFO:
ವಿದ್ಯಾಭ್ಯಾಸದ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಿದೇಶಿಗರ ಅಕ್ರಮ ವಾಸವಾಗುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ನಗರ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಈಗಾಗಲೇ ಈ ರೀತಿಯಾಗಿ ಅಕ್ರಮವಾಗಿ ನೆಲೆಸಿದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದು, ಈವರೆಗೆ 83 ಪ್ರಕರಣ ದಾಖಲಾದರೆ ದಸ್ತಗಿರಿ 127 ನಡೆದಿದೆ. ಬೆಂಗಳೂರು ನಗರದಲ್ಲಿ ವೀಸಾ ಅವಧಿ ಮುಗಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ವಾಸವಾಗಿದ್ದಾರೆ. ಇಂತಹ ವಿದೇಶಿಗರು ಕಾನೂನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ . ಸದನದಲ್ಲೂ ಈ ಕುರಿತಾಗಿ ಚರ್ಚೆ ನಡೆದಿತ್ತು.
ವಿದೇಶಿಗರಿಂದ ಮಾದಕ ದ್ರವ್ಯ ಮಾರಾಟ,ವಿದ್ಯಾಭ್ಯಾಸದ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಿದೇಶಿಗರ ಅಕ್ರಮ ವಾಸ! ದಾಖಲಾದ ಪ್ರಕರಣ 83, ಬಂಧನ 127! - illegal immigrants foreigners in bengaluru city - vijaykarnataka