Loading the player...


INFO:
ಅ. 15ರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಒಂದು ಕಡೆ ಮರವೊಂದರ ಕೊಂಬೆ ಮುರಿದು ಬಂದು ಮೆಟ್ರೋ ಹಳಿಯ ಮೇಲೆ ಬಿದ್ದಿದ್ದರಿಂದ ಮರುದಿನ ಬೆಳಗಿನ ಜಾವದ ಸಂಚಾರ ವ್ಯವಸ್ಥೆಯಲ್ಲಿ ಕೊಂಚ ಏರುಪೇರಾಗಿತ್ತು. ಎಂದಿನಂತೆ ಮುಂಜಾನೆ 5ಕ್ಕೆ ಆರಂಭವಾಗಬೇಕಿದ್ದ ರೈಲುಗಳ ಸಂಚಾರವನ್ನು ಈ ಮಾರ್ಗದಲ್ಲಿ ತಡೆ ಹಿಡಿಯಲಾಗಿತ್ತು. ಕೂಡಲೇ ನಮ್ಮ ಮೆಟ್ರೋ ಸಿಬ್ಬಂದಿಯು ಕಾರ್ಯೋನ್ಮುಖರಾಗಿ ಮರವನ್ನು ತೆರವುಗೊಳಿಸಿದ್ದರು. ಬೆಳಗ್ಗೆ ಸುಮಾರು 8.30ರ ನಂತರ ನೇರಳೆ ಮಾರ್ಗದಲ್ಲಿ ಸಂಪೂರ್ಣವಾಗಿ ರೈಲು ಸಂಚಾರ ಆರಂಭವಾಯಿತು.
ಬೆಂಗಳೂರು ಮೆಟ್ರೋ ತಾಜಾ ಸುದ್ದಿ,ನೇರಳೆ ಬಣ್ಣದ ಮಾರ್ಗದಲ್ಲಿ ಮೆಟ್ರೋ ಲೈನ್ ಗೆ ಅಡ್ಡಬಿದ್ದಿದ್ದ ಮರ ತೆರವು; ಬೆಳಗ್ಗೆಯಿಂದಲೇ ಸಂಚಾರ ಸುಗಮ - namma metro latest news - tree fallen on purple line evacuated - movement of trains normal - vijaykarnataka