Loading the player...


INFO:
ಪಹಲ್ಗಾಮ್ ನಲ್ಲಿ ಏ. 22ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರಾದ ಮಂಜುನಾಥ್ ಹಾಗೂ ಭರತ್ ಭೂಷಣ್ ಅವರ ಪಾರ್ಥಿವ ಶರೀರಗಳು ವಿಶೇಷ ವಿಮಾನದ ಮೂಲಕ ಏ. 23ರ ಮಧ್ಯರಾತ್ರಿ 3.30ರ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಥಿವ ಶರೀರಗಳಿರುವ ಬಾಕ್ಸ್ ಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸ್ವೀಕರಿಸಲಿದ್ದಾರೆ. ಮೃತರ ಸಂಬಂಧಿಕರು ಬೇರೊಂದು ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು, ಅವರ ವಿಮಾನ ಏ. 24ರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಬೆಂಗಳೂರಿನ ಮೃತರ ಪಾರ್ಥಿವ ಶರೀರಗಳನ್ನು ಅವರವರ ಮನೆಗಳಿಗೆ ಕೊಂಡೊಯ್ಯಲು ವ್ವವಸ್ಥೆ ಮಾಡಲಾಗಿದೆ.
ಪಹಲ್ಗಾಮ್ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರು,ಪಹಲ್ಗಾಮ್ ದಾಳಿಯಲ್ಲಿ ಮೃತರಾದ ಕನ್ನಡಿಗರ ಪಾರ್ಥಿವ ಶರೀರ ಏ. 23ರ ಮಧ್ಯರಾತ್ರಿ ಬೆಂಗಳೂರಿಗೆ ಆಗಮನ - pahalgam terror attack 2025 - mortal bodies of kannadigas - manjunath and bharat - brought on 23 april midnight to bangalore airport - vijaykarnataka