Loading the player...


INFO:
ವಕ್ಫ್ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಇತ್ತೀಚೆಗೆ ದಾಖಲಾಗಿದ್ದ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ. ಹಾವೇರಿಯ ರೈತರೊಬ್ಬರ ಆತ್ಮಹತ್ಯೆಗೆ ವಕ್ಫ್ ಮಂಡಳಿಯೇ ಕಾರಣ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು ಅವರು. ಆದರೆ, ಆನಂತರದಲ್ಲಿ ಆ ರೈತರ ಸಾವು ಸಾಲ ಬಾಧೆಯಿಂದ ಆಗಿದ್ದೆಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದರು. ಹಾಗಾಗಿ, ಸೂರ್ಯ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಒಡನೆಯೇ ಸೂರ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಕರ್ನಾಟಕ ಹೈಕೋರ್ಟ್ ಅವರ ಕೇಸ್ ಗೆ ಸ್ಟೇ ಕೊಟ್ಟಿದೆ.
ತೇಜಸ್ವಿ ಸೂರ್ಯ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ,ಹಾವೇರಿ ರೈತನ ಆತ್ಮಹತ್ಯೆ ಕುರಿತ ಟ್ವೀಟ್ ಕೇಸ್: ತೇಜಸ್ವಿ ಸೂರ್ಯಗೆ ಹೈಕೋರ್ಟ್ ರಿಲೀಫ್ - tejaswi surya’s tweet on haveri farmer death row - karnataka high court gives stay to the proceedings - vijaykarnataka