Loading the player...


INFO:
ರಾಷ್ಟ್ರೀಯ ಹೆದ್ದಾರಿ 48ರ ಕುಲುವನಹಳ್ಳಿ ಗೇಟ್‌ ಬಳಿ ಕ್ಯಾಂಟರ್‌ ಲಾರಿ ಮತ್ತು ಕಟ್ಟಡ ಕಾರ್ಮಿಕರು ಪ್ರಯಾಣಿಸುತ್ತಿದ್ದ 407 ಟೆಂಪೋ ಮಧ್ಯೆ ಅಪಘಾತವಾಗಿ ಮೂವರು ರ್ದುಮರಣಕ್ಕೀಡಾಗಿದ್ದಾರೆ. ಈ ಅಪಘಾತದಲ್ಲಿ ಆರು ಜನರ ಸ್ಥಿತಿ ಚಿಂತಾಜನಕವಾಗಿದೆ. ವಾರಾಂತ್ಯಗಳಲ್ಲಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಅಪಘಾತಗಳೂ ಸಹ ಸಾಮಾನ್ಯ ಎನ್ನುವಂತಾಗಿದೆ. ಭಾನುವಾರ ನಡೆದಿರುವ ಅಪಘಾತದ ತೀವ್ರತೆಯನ್ನು ನಜ್ಜುಗುಜ್ಜಾದ ವಾಹನಗಳು ಹಾಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರ್ಮಿಕರ ದೇಹಗಳು, ವಸ್ತುಗಳು ಸಾರಿ ಹೇಳುವಂತಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ತುಮಕೂರು ಮಾರ್ಗದಲ್ಲಿ ಅಪಘಾತ,ತುಮಕೂರು-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ: ಕ್ಯಾಂಟರ್‌-ಟೆಂಪೋ ಡಿಕ್ಕಿ, ಚೆಲ್ಲಾಪಿಲ್ಲಿಯಾದ ಕಾರ್ಮಿಕರ ದೇಹಗಳು! - three labours lost life in tumakuru bengaluru nh 48 road accident canter rammed moving 407 tempo nelamangala - vijaykarnataka