Loading the player...


INFO:
ಚೀನಾದ ಮಾಧ್ಯಮಗಳಾದ ಗ್ಲೋಬಲ್‌ ಟೈಮ್ಸ್‌ ಮತ್ತು ಕ್ಸಿನ್‌ಹುವಾದ ಸಾಮಾಜಿಕ ಮಾಧ್ಯಮ ‘ಎಕ್ಸ್‌ʼ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಈ ಮಾಧ್ಯಮಗಳು ಭಾರತೀಯ ಸೈನ್ಯದ ಬಗ್ಗೆ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಹಬ್ಬಿಸುತ್ತಿದ್ದವು. ಹೀಗಾಗಿ ಭಾರತದ ರಾಯಭಾರಿ ಕಚೇರಿ ಈ ಬಗ್ಗೆ ಎಚ್ಚರಿಕೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅರುಣಾಚಲದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳನ್ನು ಭಾರತ ತಿರಸ್ಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಗ್ಲೋಬಲ್ ಟೈಮ್ಸ್‌ ಖಾತೆ ನಿರ್ಬಂಧಿಸಿದ ಭಾರತ,ಸೇನೆಯ ಬಗ್ಗೆ ಸುಳ್ಳು ಸುದ್ದಿ ಬಿತ್ತರ; ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್‌ X ಖಾತೆ’ ನಿರ್ಬಂಧಿಸಿದ ಭಾರತ - govt of india banned chinas global times x account for for spreading fake news about army - vijaykarnataka