Loading the player...


INFO:
ದಿಲ್ಲಿಯಲ್ಲಿ ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ 'ಐಎನ್‌ಡಿಐಎ' ಒಕ್ಕೂಟದ ನಾಯಕರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಸಂಸತ್ತಿನ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರು 'ಮಿಂಟಾ ದೇವಿ' ಫೋಟೋ ಇರುವ ಟೀ ಶರ್ಟ್ ಧರಿಸಿದ್ದರು. ಮಿಂಟಾ ದೇವಿ ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷದ ಮಹಿಳೆ ಎಂದು ನಮೂದಿತವಾಗಿದ್ದಾರೆ. ಚುನಾವಣಾ ಆಯೋಗದ ವೈಫಲ್ಯವನ್ನು ವಿರೋಧಿಸಿ ನಾಯಕರು ಘೋಷಣೆಗಳನ್ನು ಕೂಗಿದರು.
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ,124 ವರ್ಷದ ಮಿಂಟಾ ದೇವಿ ಮುಂದಿಟ್ಟುಕೊಂಡು ಪ್ರತಿಭಟನೆ ತೀವ್ರಗೊಳಿಸಿದ 'ಐಎನ್‌ಡಿಐಎ' ಒಕ್ಕೂಟ, ಯಾರೀಕೆ? - india alliance intensified its protest in parliament using 124 year old voter name who is minta devi - vijaykarnataka