Loading the player...


INFO:
ಭಾರತೀಯ ರೈಲ್ವೆ ಕಡಿಮೆ ದೂರದ ಪ್ರಯಾಣಕ್ಕಾಗಿ ಹೊಸದಾಗಿ 50 ‘ನಮೋ ಭಾರತ್ʼ ರೈಲುಗಳನ್ನು ನಿರ್ಮಿಸಲು ಮುಂದಾಗಿದೆ. ಇದರ ಜೊತೆಗೆ, 100 ಮೆಮು ರೈಲುಗಳ ಸೇವೆಯೂ ಪ್ರಯಾಣಿಕರಿಗೆ ಸಿಗಲಿದೆ. ‘ವಂದೇ ಮೆಟ್ರೋʼ ಎಂದು ಕರೆಯಲ್ಪಡುತ್ತಿದ್ದ ‘ನಮೋ ಭಾರತ್‌ʼ ರೈಲುಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲೇ ಇವೆ. ‘ನಮೋ ಭಾರತ್ʼ ರೈಲುಗಳನ್ನು ಕಡಿಮೆ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. 12 ಬೋಗಿಗಳ ಈ ರೈಲಿನಲ್ಲಿ 1,150 ಜನರು ಕುಳಿತುಕೊಳ್ಳಬಹುದು ಮತ್ತು 2,058 ಜನರು ನಿಂತುಕೊಳ್ಳಬಹುದು.
ನಮೋ ಭಾರತ್ ರೈಲು ಸೇವೆ,ಸದ್ಯದಲ್ಲೇ ಪ್ರಯಾಣಿಕರಿಗೆ ಸಿಗಲಿದೆ ‘ನಮೋ ಭಾರತ್ʼ ರೈಲು ಸೇವೆ! ಏನಿದರ ವಿಶೇಷತೆ? - indian railways is set to enhance short distance travel by introducing 50 new namo bharat trains - vijaykarnataka