Loading the player...


INFO:
ಈಗಾಗಲೇ ಸುಡುತ್ತಿರುವ ತಾಪಮಾನಕ್ಕೆ ಉತ್ತರ ಭಾರತದ ಜನ ಬಳಲಿ ಬೆಂಡಾಗಿದ್ದರೆ, ಹಲವರು ಮನೆಯಿಂದ ಹೊರ ಬರಲು ಹೆದರುತ್ತಿದ್ದರೆ, ಬಹಳಷ್ಚು ಮಂದಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇದೇನೂ ಅಲ್ಲ, ಸುದೀರ್ಘವಾದ ಹೀಟ್ ವೇವ್ ಇನ್ನಷ್ಟೇ ಬರಬೇಕಿದೆ ಎಂದು ಹೇಳುತ್ತಿದ್ದಾರೆ ಹವಾಮಾನ ತಜ್ಞರು. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 45 ಡಿಗ್ಲಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದೀಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಭವಿಷ್ಯ ಭೀಕರವಾಗಿರಲಿದೆ ಎಂಬುದು ತಜ್ಞರ ಅಭಿಪ್ಪಾಯವಾಗಿದೆ.
ತಾಪಮಾನ ಹೆಚ್ಚಳ,ಬಿಸಿಲಿಗೆ ಕುದಿಯುತ್ತಿದೆ ಉತ್ತರ ಭಾರತ!: ಇದೇನೂ ಅಲ್ಲ, ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿದ್ದಾರೆ ಹವಾಮಾನ ತಜ್ಞರು! - indian weather expert  predicts that countrys longest heatwave yet to come - vijaykarnataka