Loading the player...


INFO:
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೈಗಾ ಅಣುಸ್ಥಾವರ ಕಾರ್ಯ ನಿರ್ವಹಿಸುತ್ತಿದೆ. ಅದರ ಜೊತೆಗೆ, ಆ ಪರಮಾಣು ಸ್ಥಾವರದ ಪಕ್ಕದಲ್ಲೇ ಮತ್ತೆರಡು ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಒಟ್ಟು 10 ಹೊಸ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕರ್ನಾಟಕ ಸೇರಿದಂತೆ ಹರ್ಯಾಣ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಈ ಸ್ಥಾವರಗಳು ನಿರ್ಮಾಣವಾಗಲಿವೆ ಎಂದು ಪರಮಾಣು ಇಲಾಖೆಯ ಸಚಿವ ಜಿತೇಂದ್ರ ಸಿಂಗ್, ಸಂಸತ್ತಿಗೆ ತಿಳಿಸಿದ್ದಾರೆ.
Nuclear Power Reactors In Karnataka,ಕರ್ನಾಟಕಕ್ಕೆ ಎರಡು ಹೊಸ ಪರಮಾಣು ಸ್ಥಾವರ; ದೇಶದಲ್ಲಿ ಒಟ್ಟು 10 ಹೊಸ ಸ್ಥಾವರ ಸ್ಥಾಪನೆಗೆ ಕೇಂದ್ರ ಒಪ್ಪಿಗೆ - karnataka will get two more nuclear power reactors along with kaiga in uttara kannada - vijaykarnataka