Loading the player...


INFO:
ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಆಡಳಿತದಲ್ಲಿ ನಾನಾ ಸಾಧನೆ ಮಾಡಿರುವ ಬಗ್ಗೆ ಜನತೆ ಕೊಂಡಾಡಿದ್ದಾರೆ. ಜನಧನ್ ಯೋಜನೆ, ಕಿಸಾನ್ ಸಮ್ಮಾನ್, ರಕ್ಷಣಾ ಉತ್ಪಾದನೆ ಹೆಚ್ಚಳ, ಆಯುಷ್ಮಾನ್ ಭಾರತ್, ತ್ರಿವಳಿ ತಲಾಕ್ ರದ್ದತಿ, ಹೆದ್ದಾರಿ ಅಭಿವೃದ್ಧಿ, ಉಗ್ರ ನಿಗ್ರಹ, ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಇಂಡಿಯಾ, ಸ್ಟಾರ್ಟಪ್‌ಗಳಿಗೆ ಉತ್ತೇಜನ, ಕೃಷಿ ಸಂಬಂಧಿತ ಯೋಜನೆ, ಮುದ್ರಾ ಯೋಜನೆ, ಮನೆಯಿಲ್ಲದವರಿಗೆ ಆವಾಸ್‌ ಯೋಜನೆ, ಸೌರ ಯೋಜನೆ ಹೀಗೆ ಸಾಕಷ್ಟಿವೆ. ಇವು ದೇಶದ ಅಭಿವೃದ್ಧಿಗೆ ಮಹತ್ವದ ತಿರುವು ನೀಡಿವೆ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಿ ಪ್ರಯೋಗಿಸಿದ ಆಪರೇಷನ್‌ ಸಿಂಧೂರ್‌ ಕೂಡ ಹಲವರ ಮನ ಗೆದ್ದಿತು. ಈ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ ಮತ್ತು ಆರ್ಥಿಕ ಪ್ರಗತಿಗೆ ಸಹಕಾರಿಯಾಗಿವೆ. ಬಡತನದ ರೇಖೆ ಇಳಿಕೆಯಾಗಿದೆ.
ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಏನು,(ವಿಕ ಫೋಕಸ್‌) ಮೋದಿ 3.0 ಆಡಳಿತ: 11 ಟರ್ನಿಂಗ್‌ ಪಾಯಿಂಟ್‌, ಆರ್ಥಿಕ, ಸಾಮಾಜಿಕ, ರಕ್ಷಣಾ ಕ್ಷೇತ್ರದಲ್ಲಿ ಹೊಸ ದಿಕ್ಕು! - modi 3.0 administration  11 turning points of the modi era  a new direction in the economic  social and defense sectors - vijaykarnataka