Loading the player...


INFO:
ಆಪರೇಷನ್‌ ಸಿಂಧೂರ ಮೂಲಕ ಭಾರತದ ಶಕ್ತಿ ಏನು ಅಂತ ತೋರಿಸಿಕೊಟ್ರೂ ಪಾಕಿಸ್ತಾನ ಮಾತ್ರ ತನ್ನ ಉದ್ಧಟತನವನ್ನು ಬಿಡುತ್ತಿಲ್ಲ, ಜಗತ್ತಿನ ಮುಂದೆ ಬೆತ್ತಲಾಗಿ ನಿಂತ್ರೂ ಇನ್ನೂ ಕಾಲು ಕೆರೆದು ಜಗಳಕ್ಕೆ ನಿಂತಿದೆ. ಪಹಲ್ಗಾಮ್‌ ದಾಳಿ ಬಳಿಕ ಭಾರತ ಪಾಕಿಸ್ತಾನವನ್ನು ಅಟ್ಟಾಡಿಸಿ ಹೊಡೆದ್ರು ನನಗೇನು ಆಗಿಲ್ಲ ಅನ್ನೋ ರೀತಿ ವರ್ತಿಸುತ್ತಿದೆ. ಭಾರತದ ಹೊಡೆತದಿಂದ ಇನ್ನೂ ಸುಧಾರಿಸಿಕೊಂಡಿಲ್ಲ ಆಗಲೇ ಪಾಕ್‌ ಸೇನಾ ಮುಖ್ಯಸ್ಥ ಅಸೀಮ್​ ಮುನೀರ್ ಪ್ರಚೋಧನಕಾರಿ ಭಾಷಣ ಮಾಡುವ ಮೂಲಕ ಮತ್ತೆ ಭಾರತಕ್ಕೆ ಬಹಿರಂಗ ಸವಾಲ್‌ ಹಾಕಿದ್ದಾರೆ. ಇದು ಮತ್ತೆ ಭಾರತವನ್ನು ಕೆರಳಿಸುವಂತೆ ಮಾಡಿದೆ. ಅಮೆರಿಕದ ವಾಷಿಂಗ್ಟನ್ ಡಿಸಿಯ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಭಾಷಣ ಮಾಡುವ ವೇಳೆ, ಭಾರತದ ವಿರುದ್ಧ ನಾವು ಜಯ ಸಾಧಿಸಿದ್ದೇವೆ ಮತ್ತು ಕಾಶ್ಮೀರ ಪಾಕಿಸ್ತಾನದ ಜೀವಾಳ ಎಂದು ಕರೆದಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಪಾಪಿ ಪಾಕಿಸ್ತಾನ ಮತ್ತೆ ಭಾರತವನ್ನು ಕೆಣಕುವ ಕೆಲಸ ಮಾಡುತ್ತಿದೆ..
ಭಾರತಕ್ಕೆ ಸವಾಲೆಸೆದ ಅಸೀಮ್‌ ಮುನೀರ್‌,ʻಕಾಶ್ಮೀರ ಪಾಕಿಸ್ತಾನದ ಜೀವಾಳʼ; ಮತ್ತೆ ಉದ್ಧಟತನ ಮೆರೆದ ಪಾಕ್‌ ಸೇನಾ ಮುಖ್ಯಸ್ಥ, ಭಾರತಕ್ಕೆ ಬಹಿರಂಗ ಸವಾಲ್‌! - pakistan-army-chief-asim-munir-has-challenged-india- that-kashmir-is-the-lifeblood-of-pakistan - vijaykarnataka