Loading the player...


INFO:
ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಪಾತ್ರ ಇಲ್ಲ ಎಂದಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಕಾಶ್ಮೀರ ವಿಚಾರವಾಗಿ ಭಾರತ ಮೂರನೇ ಶಕ್ತಿಯ ಹಸ್ತಕ್ಷೇಪವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ಅಮೆರಿಕದ ಮಧ್ಯಸ್ಥಿಕೆ ಕಾರಣ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶಶಿ ತರೂರ್‌ ಹೇಳಿದ್ದಾರೆ. ಆದರೆ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ತಿಳಿಗೊಳಿಸಲು ಅಮೆರಿಕ ಪ್ರಯತ್ನಿಸಿದೆ ಎಂಬುದನ್ನು ಒಪ್ಪಬಹುದು ಎಂದು ಕಾಂಗ್ರೆಸ್‌ ಸಂಸದ ಹೇಳಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆ ವಾದ ತಿರಸ್ಕರಿಸಿದ ಶಶಿ ತರೂರ್‌,Operation Sindoor: ಕದನ ವಿರಾಮಕ್ಕೆ ನಮ್ಮ ರೇಡಿಯೇಷನ್‌ ಕಾವು ಕಾರಣ, ಅಮೆರಿಕದ ಮಿಡಿಯೇಷನ್‌ ಅಲ್ಲ; ಶಶಿ ತರೂರ್!‌ - us role in india-pak ceasefire not mediation says congress mp shashi tharoor - vijaykarnataka