Loading the player...


INFO:
ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಆದರೆ ರಾಜ್ಯದ ಬೇಡಿಕೆಗೆ ಓಕೆ ಅನ್ನುತ್ತಾ ಕೇಂದ್ರ ಸರ್ಕಾರ? ಎಂಬ ಕುತೂಹಲ ಕೆರಳಿಸಿದೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ದಸರಾದಲ್ಲಿ ಏರ್ ಶೋ ನಡೆಸಿದರೆ ಹಬ್ಬಕ್ಕೆ ಮತ್ತಷ್ಟು ಮೆರಗು ಬರಲಿದೆ.
ಬೆಂಗಳೂರು ಏರ್ ಶೋ,ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ: ರಾಜ್ಯದ ಬೇಡಿಕೆಗೆ ಓಕೆ ಅನ್ನುತ್ತಾ ಕೇಂದ್ರ ಸರ್ಕಾರ? - air show in mysuru dasara chief minister of karnataka siddaramaiah will meet rajnath singh - vijaykarnataka