Loading the player...


INFO:
ಕೆಆರ್ ನಗರದ ಮಹಿಳೆಯೊಬ್ಬರ ಅಪಹರಣ ಕೇಸ್ ನಲ್ಲಿ ಭವಾನಿ ರೇವಣ್ಣನವರಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದ ಎಸ್ಐಟಿಗೆ ಹಿನ್ನಡೆಯಾಗಿದೆ. ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮಾಜಿ ಸಚಿವ ಎಚ್ ಡಿ ರೇವಣ್ಣನವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಈ ಹಿಂದೆ ಕೆಆರ್ ನಗರದ ಮಹಿಳೆಯುರ ದೂರು ದಾಖಲಿಸಿದ್ದರು. ಹಾಗಾಗಿ ರೇವಣ್ಣ ವಿರುದ್ಧ ಕೇಸ್ ದಾಖಲಾಗಿ ತನಿಖೆ ಶುರುವಾದಾಗ ಆ ಸಂತ್ರಸ್ತ ಮಹಿಳೆಯನ್ನು ಅಪಹರಿಸಿ ಗ್ರಾಮವೊಂದರಲ್ಲಿ ಕೂಡಿಹಾಕಲಾಗಿತ್ತು. ಆ ಅಪಹಣವನ್ನು ಭವಾನಿ ರೇವಣ್ಣನವರೇ ಮಾಡಿದ್ದಾರೆ ಎಂಬ ಆರೋಪದಡಿ ಅವರ ಮೇಲೆಯೂ ಎಫ್ಐಆರ್ ಆಗಿತ್ತು.
ಎಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಕೇಸ್,ಕಿಡ್ನ್ಯಾಪ್ ಕೇಸ್ ನಲ್ಲಿ ಭವಾನಿ ರೇವಣ್ಣಗೆ ‘ಸುಪ್ರೀಂ ಕೋರ್ಟ್’ ಬಿಗ್ ರಿಲೀಫ್ - ಹೈಕೋರ್ಟ್ ಜಾಮೀನು ಕೊಟ್ಟಿದ್ದು ಸರಿ ಎಂದ ಸರ್ವೋಚ್ಛ ನ್ಯಾಯಾಲಯ - bail to bhavani revanna in kidnap case - supreme court upholds the decision of karnataka high court - vijaykarnataka