Loading the player...


INFO:
ಜನಾಕ್ರೋಶಕ್ಕೆ ಹೆದರಿ ಕ್ರೈಸ್ತ- ಹಿಂದೂ ಜಾತಿಗಳನ್ನು ಜಾತಿ ಗಣತಿ ಸಮೀಕ್ಷಾ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಾಗಿ ಅವರು ಟ್ವೀಟ್ ಮಾಡಿ, ಹಿಂದೂ ಸಮುದಾಯದ ವಿರುದ್ಧ ಸಂದರ್ಭ ಬಂದಾಗಲೆಲ್ಲ ಕುತಂತ್ರ ಹೆಣೆಯುವುದರಲ್ಲಿ ಕಾಂಗ್ರೆಸ್ ನಿಸ್ಸೀಮತನವನ್ನು ತೋರುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಶಾಶ್ವತ ಹಿಂದುಳಿದ ಆಯೋಗದ ಕಾರ್ಯದರ್ಶಿ ಪತ್ರಿಕಾ ಹೇಳಿಕೆ ನೀಡಿ, ಪರಿಶಿಷ್ಟ ಜಾತಿಯೊಂದಿಗೆ ಜೋಡಿತಗೊಂಡ 14 ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ,ಜನಾಕ್ರೋಶಕ್ಕೆ ಹೆದರಿ ಕ್ರೈಸ್ತ- ಹಿಂದೂ ಜಾತಿಗಳಿಗೆ ಕೊಕ್ ! ಕಾಂಗ್ರೆಸ್ ಸರ್ಕಾರದ ವಿರುದ್ದ ವಿಜಯೇಂದ್ರ ವಾಗ್ದಾಳಿ - by vijayendra reactions caste census in karnataka - vijaykarnataka