Loading the player...


INFO:
ಕೇಂದ್ರ ಚುನಾವಣಾ ಆಯೋಗವು (ಇಸಿಐ), ಮಾ. 16 ಮಧ್ಯಾಹ್ನ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಸಾಮಾನ್ಯವಾಗಿ, ಯಾವುದೇ ಚುನಾವಣೆಯ ದಿನಾಂಕಗಳು ಪ್ರಕಟಗೊಂಡ ಮರುಕ್ಷಣವೇ ಚುನಾವಣಾ ನೀತಿ ಸಂಹಿತೆಯು ಜಾರಿಗೊಳ್ಳುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾಗುತ್ತಲೇ ನೀತಿ ಸಂಹಿತೆಯು ಜಾರಿಗೊಳ್ಳಲಿದೆ. ಜನಪ್ರತಿನಿಧಿಗಳ ಅಧಿಕಾರ ಹಿಡಿತ ಸೀಮಿತವಾಗಿ ಅಧಿಕಾರಿ ಅಥವಾ ಸರ್ಕಾರಿ ಸಿಬ್ಬಂದಿ ವರ್ಗಕ್ಕೆ ಪೂರ್ತಿ ಆಡಳಿತ ಶಕ್ತಿ ಬರುತ್ತದೆ. ಕರ್ನಾಟಕದಲ್ಲಿ ಮೊದಲೇ ಬರ ಪರಿಸ್ಥಿತಿಯಿದ್ದು, ಚುನಾವಣಾ ಕರ್ತವ್ಯದಡಿ ರೈತರಿಗೆ, ಜನಸಾಮಾನ್ಯರಿಗೆ ಕಚೇರಿ ಕೆಲಸಗಳು ನಡೆಯುವುದು ಅನುಮಾನವಾಗಿದೆ.
ಕರ್ನಾಟಕದಲ್ಲಿ ನೀತಿ ಸಂಹಿತೆ 2024,ಮಾ. 16ರ ಮಧ್ಯಾಹ್ನ 3ಕ್ಕೆ ಲೋಕಸಭೆ ಚುನಾವಣೆ ವೇಳಾಪಟ್ಟಿ - ನೀತಿ ಸಂಹಿತೆ ಜಾರಿ; ಸರ್ಕಾರಿ ಕಚೇರಿ ಕೆಲಸಗಳು ವಿಳಂಬ - code of conduct to be implemented soon after eci announce poll dates lok sabha elections 2024 on march 16, 2024 - vijaykarnataka