Loading the player...


INFO:
ಕರ್ನಾಟಕ ರಾಜ್ಯಾದಂತ ಭ್ರಷ್ಟರ ಭೇಟೆಗೆ ಲೋಕಾಯುಕ್ತ ಅಧಿಕಾರಿಗಳು ಇಳಿದಿದ್ದಾರೆ. ಗರುವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಮಂಗಳೂರು ಮಂಡ್ಯ ಸೇರಿ ಸುಮಾರು ಏಳು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಟೌನ್‌ ಪ್ಲಾನಿಂಗ್‌ ಹಾಗೂ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಾವೇರಿ ನೀರಾವರಿ ನಿಗಮಗ ಎಂಡಿ ಮನೆ ಮೇಲೂ ದಾಳಿ ಮಾಡಿದ್ದಾರೆ. ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯ ಎರಡು ಮನೆಯಲ್ಲೂ ಪರೀಶೀಲನೆ ಮುಂದಾಗಿದೆ. ಬೆಂಗಳೂರಿನ ಟೌನ್‌ ಪ್ಲಾನಿಂಗ್‌ ಇಲಾಖೆ ನೀರ್ದೇಶಕ ತಿಪ್ಪೆಸ್ವಾಮಿ, ಅಬಕಾರಿ ಇಲಾಖೆ ಅಧಿಕಾರಿ ಎಸ್‌ಪಿ ಮೋಹನ್‌, ಕಾವೇರಿ ನಿಗಮದ ಎಂಡಿ ಮಹೇಶ್‌ ಹಾಗೂ ಆತನ ಸಂಬಂಧಿಕ ಮೇಲೆ ದಾಳಿ ನಡೆಸಲಾಗಿದೆ. ಈ ಎಲ್ಲಾ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಏಕಕಾಲದಲ್ಲೇ ದಾಳಿ ನಡೆಸಿ ಸದ್ಯ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್‌,ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌ ನೀಡಿದ ಲೋಕಾಯುಕ್ತಾ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗೆ ಡವಡವ.! - karnataka lokayuktha ride in 7 places of govermeent officers bengaluru mangluru anf mandya - vijaykarnataka