Loading the player...


INFO:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಕರ್ನಾಟದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದು. ಈ ದೇವಸ್ಥಾನಕ್ಕೆ ಆಗಾಗ್ಗೆ ಗಣ್ಯರು, ಹಿರಿಯ ಅಧಿಕಾರಿಗಳು ಭೇಟಿ ನೀಡುತ್ತಿರುತ್ತಾರಾದ್ದರಿಂದ, ಅವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಬರಲು 2019ರಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಇನ್ನೋವಾ ಕ್ರಿಸ್ಟಾ ಕಾರನ್ನು ಖರೀದಿಸಿತ್ತು. 2019ರ ಡಿಸೆಂಬರ್ ನಲ್ಲಿ ಇದನ್ನು ತಾತ್ಕಾಲಿಕ ಸೇವೆಗೆಂದು ಮುಜರಾಯಿ ಇಲಾಖೆಯು ಪಡೆದಿದ್ದು, ಬೆಂಗಳೂರಿನಲ್ಲಿ ಆ ಕಾರು ಈಗಲೂ ಓಡಾಡುತ್ತಿದೆ. ಆದರೆ, ಅದರ ವಿಮಾ ಮೊತ್ತ, ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡವನ್ನು ದೇವಸ್ಥಾನದ ಆಡಳಿತ ಮಂಡಳಿ ಕಟ್ಟುವಂತಾಗಿದೆ!
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಕಾರಿನ ಸೇವೆ ಬೆಂಗಳೂರಿನ ಕಚೇರಿಗೆ; ಇನ್ಶೂರೆನ್ಸ್, ಟ್ರಾಫಿಕ್ ದಂಡ ಮಾತ್ರ ದೇವಸ್ಥಾನಕ್ಕೆ! - innova car belong to kukke subrahmanya temple used by karnataka mujarayi department in bengaluru but traffic violation fines payment to temple authority - vijaykarnataka