Loading the player...


INFO:
ಮೈಸೂರು ಹಾಗೂ ಕೊಡಗಿನ ಕುಶಾಲನಗರವನ್ನು ಸಂಪರ್ಕಿಸುವ ಹೆದ್ದಾರಿಯ ಅಗಲೀಕರಣದ ಕಾಮಗಾರಿ ಇದೇ ಸೆಪ್ಟಂಬರ್ ನಿಂದ ಆರಂಭವಾಗುತ್ತದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಈ ಯೋಜನೆ ಅನುಷ್ಠಾನ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಗೆ, ಯೋಜನೆಗೆ ಸಂಬಂಧಪಟ್ಟಿರುವ ನಾನಾ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2024ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
'ಮೈಸೂರು ಕುಶಾಲನಗರ ಹೆದ್ದಾರಿ ಅಗಲೀಕರಣ 2024ರ ಡಿಸೆಂಬರ್ ಗೆ ಮುಕ್ತಾಯ' - mysuru mp pratap simha says that mysore kushalnagar highway widening work will be completed by 2024 december - vijaykarnataka