Loading the player...


INFO:
ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರೊ. ಭಗವಾನ್ ವಿರುದ್ಧ ಒಕ್ಕಲಿಗ ಸಮುದಾಯ ಮುಗಿಬಿದ್ದಿದೆ. ಅ. 13ರಂದು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಭಗವಾನ್, ಒಕ್ಕಲಿಗ ಸಮುದಾಯದವರು ಸಂಸ್ಕೃತಿ ಹೀನರು ಎಂದು ಮಾತನಾಡಿದ್ದರು. ಅಲ್ಲದೆ, ಈ ಹೇಳಿಕೆಯು ತಮ್ಮದಲ್ಲವೆಂದೂ, ಅದನ್ನು ಕುವೆಂಪು ಅವರೇ ಹೇಳಿದ್ದರೆಂದೂ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ಅವರ ಮನೆಯ ಮುಂದೆ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸಿದೆ.
ಭಗವಾನ್ ಮನೆ ಮುಂದೆ ಎಳ್ಳು ನೀರು ಬಿಟ್ಟು ಒಕ್ಕಲಿಗರ ಪ್ರತಿಭಟನೆ - vokkaligas protest against prof. bhagawan’s house in mysuru for his remarks against the vokkaliga community - vijaykarnataka