Loading the player...


INFO:
ಮುಂಗಾರು ಮಳೆ ಕೊರತೆಯು ಉತ್ತರ ಕರ್ನಾಟಕದ ಬಹುಭಾಗವನ್ನು ಕಾಡುತ್ತಿದೆ. ರೈತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಮಳೆಯಾಶ್ರಿತ ಭೂಮಿಗಳಲ್ಲಿ ಹತ್ತಿ, ತೊಗರಿ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ಬೆಳೆದವರಂತೂ ಆಗಸದತ್ತ ಮುಖಮಾಡಿದ್ದಾರೆ. ಸಿರಿವಾರದಲ್ಲಂತೂ ರೈತರೊಬ್ಬರು ಲಕ್ಷಗಟ್ಟಲೆ ಸಾಲ ಮಾಡಿ ಬೆಳೆದ ಹತ್ತಿಗೆ ಸಕಾಲದಲ್ಲಿ ನೀರು ರೋಗ ಹತ್ತಿಕೊಂಡದ್ದರಿಂದ ಹಸುಗಳನ್ನು ಬಿಟ್ಟು ಬೆಳೆ ನಾಶ ಮಾಡಿದ್ದಾರೆ. ಅನೇಕ ರೈತರು ತಮ್ಮ ಬೆಳಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಇದು ದುಬಾರಿಯಾಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ದಾರಿ ಇಲ್ಲ.
ಮುಂಗಾರು ಮಳೆ ಕೈಕೊಟ್ಟದ್ದರಿಂದ ಬೆಳೆ ರಕ್ಷಣೆಗೆ ರೈತರ ಪರದಾಟ: ಹತ್ತಿ ಬೆಳೆ ನಾಶ ಮಾಡಿದ ಸಿರಿವಾರದ ರೈತ - farmers struggling to protect their crops due to lack of monsoon rain - vijaykarnataka