Loading the player...


INFO:
ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಇರುವುದು ಜಗತ್ತಿಗೇ ಗೊತ್ತಿರುವ ಸಂಗತಿ. ಇದೀಗ ಪಾಕಿಸ್ತಾನ ಚೀನಾ ನಿರ್ಮಿತ ಕ್ಷಿಪಣಿಯನ್ನು ಬಳಸಿ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಪಿಎಲ್-15ಇ ಪಾಕಿಸ್ತಾನಿ ವಾಯು ಸೇನೆಯ ಪ್ರಮುಖ ಆಯುಧವಾಗಿದ್ದು, ಪಾಕಿಸ್ತಾನದ ಜೆಎಫ್-17 ಬ್ಲಾಕ್ III ಮತ್ತು ಜೆ-10ಸಿಇ ಯುದ್ಧ ವಿಮಾನಗಳು ಇದನ್ನು ಬಳಸುತ್ತವೆ. ಪಾಕಿಸ್ತಾನ ತನ್ನ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ಅದರಲ್ಲೂ ಭಾರತದ ಜೊತೆಗಿನ ಉದ್ವಿಗ್ನತೆಗಳ ಸಂದರ್ಭದಲ್ಲಿ ತನ್ನ ಪಿಎಲ್-15ಇ ಸಂಗ್ರಹವನ್ನು ಹೆಚ್ಚಿಸಿಕೊಂಡಿದೆ. ಆಪರೇಷನ್ ಸಿಂದೂರ್ 2.0 ಸಂದರ್ಭದಲ್ಲಿ, ಪಾಕಿಸ್ತಾನ ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಪಿಎಲ್-15ಇ ಕ್ಷಿಪಣಿಗಳನ್ನು ಉಡಾವಣೆಗೊಳಿಸಿದೆ. ಆದರೆ, ಈ ಕ್ಷಿಪಣಿಯನ್ನು ಭಾರತದ ಎಸ್-400 ಟ್ರಯಂಫ್ ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದು ದಾಳಿಯ ಚಿತ್ರಣವನ್ನೇ ಬದಲಾಯಿಸಿದೆ.
ಪಾಕಿಸ್ತಾನದ ಪಿಎಲ್-15ಇ ಕ್ಷಿಪಣಿ,ಆಪರೇಷನ್ ಸಿಂಧೂರ್ 2.0: ಪಾಕಿಸ್ತಾನದ ಪಿಎಲ್-15ಇ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದ್ದು ಹೇಗೆ? - operation sindoor how did india shot down pakistan pl 15e missile - vijaykarnataka