Loading the player...


INFO:
ಅಮೆರಿಕ ಸೇರಿದಂತೆ ಪಾಶ್ಚಮಾತ್ಯ ರಾಷ್ಟ್ರಗಳು ಕಠಿಣ ವಲಸೆ ನೀತಿಯನ್ನು ಜಾರಿಗೆ ತರಲು ಮುಂದಾಗಿವೆ. ಆದರೆ ಹೊರದೇಶದ ಅದರಲ್ಲೂ ಪ್ರಮುಖವಾಗಿ ಭಾರತದ ಪ್ರತಿಭಾವಂತ ಉದ್ಯೋಗಿಗಳನ್ನು ಈ ದೇಶ ಕಳೆದುಕೊಳ್ಳಲಿದೆ. ಇದರ ಲಾಭ ಪಡೆಯಲು ಮುಂದಾಗಿರುವ ರಷ್ಯಾ, ವಿವಿಧ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಿರುವ ರಷ್ಯಾಕ್ಕೆ ಭಾರತದ ರಾಯಭಾರಿ ವಿನಯ್‌ ಕುಮಾರ್‌, "ಮುಂದಿನ ದಿನಗಳಲ್ಲಿ ರಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳು ಕಾಣ ಸಿಗುತ್ತಾರೆ" ಎಂದು ಹೇಳಿದ್ದಾರೆ.
ಭಾರತೀಯರಿಗೆ ಮಣೆ ಹಾಕಿದ ರಷ್ಯನ್‌ ಕಂಪನಿಗಳು,Explained: ಪಶ್ಚಿಮಕ್ಕೆ ಬೇಡವಾದ ಭಾರತೀಯ ಮೆದುಳು, ರೆಡ್‌ ಕಾರ್ಪೆಟ್‌ ಹಾಸಿದ ರಷ್ಯನ್‌ ಕಂಪನಿಗಳು; ಮಾಸ್ಕೋದತ್ತ ಬುದ್ಧಿವಂತ ಬಾನಾಡಿಗಳು - amidst western immigration clampdown russia to recruit huge numbers of indian workers in various sectors - vijaykarnataka