Loading the player...


INFO:
ಇಸ್ರೇಲ್-ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿ ವಿಷಮ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಕೆನಡಾದಲ್ಲಿ G-7 ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಇಸ್ರೇಲ್-ಇರಾನ್‌ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಳಿಸುವ ಪ್ರಯತ್ನ ನಡೆಸಬೇಕಿರುವುದರಿಂದ, ಡೊನಾಲ್ಡ್‌ ಟ್ರಂಪ್‌ ಈ ಶೃಂಗಸಭೆಯಿಂದ ಒಂದು ದಿನ ಮುಂಚಿತವಾಗಿಯೇ ನಿರ್ಗಮಿಸಲಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ರಾತ್ರಿ ಭೋಜನಕೂಟದ ಬಳಿಕ ಟ್ರಂಪ್‌ ಅಮೆರಿಕಕ್ಕೆ ಮರಳಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಇಸ್ರೇಲ್-ಇರಾನ್‌ ಕದನ ವಿರಾಮ ಒಪ್ಪಂದ ಮಾತುಕತೆ,ಮಧ್ಯಪ್ರಾಚ್ಯದ ತಲೆಬಿಸಿ; ಕೆನಡಾ G-7 ಶೃಂಗಸಭೆಗೆ ಹಾಫ್‌ ಅಟೆಂಡೆನ್ಸ್‌ ಹಾಕಲಿರುವ ಡೊನಾಲ್ಡ್‌ ಟ್ರಂಪ್! - donald trump to leave g7 summit early due to middle east situation clarifies white house - vijaykarnataka