Loading the player...


INFO:
ಎರಡನೇ ಬಾರಿ ಅಮೆರಿಕ ಗದ್ದುಗೆ ಏರಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೂರೇ ತಿಂಗಳಿಗೆ ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿವಾದಾತ್ಮಕ ನೀತಿಗಳನ್ನು ವಿರೋಧಿಸಿ ಅಮೆರಿಕದ 50 ರಾಜ್ಯಗಳ ಲಕ್ಷಾಂತರ ಜನರು ಬೀದಿಗಳಿದು ಟ್ರಂಪ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರಿ ನೌಕರರ ಕಡಿತ, ವ್ಯಾಪಾರ ತೆರಿಗೆ ಮತ್ತು ನಾಗರಿಕ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ ವಾಷಿಂಗ್ಟನ್, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಹಲವು ಕಡೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಎಲಾನ್‌ ಮಸ್ಕ್‌ ವಿರುದ್ಧ ಪ್ರತಿಭಟನೆ ನಡೆಸಿದರು.
ಡೊನಾಲ್ಡ್ ಟ್ರಂಪ್ ಎಲಾನ್ ಮಸ್ಕ್ ಅಮೆರಿಕ ಪ್ರತಿಭಟನೆ,ʻಡೊನಾಲ್ಡ್ ಟ್ರಂಪ್‌ ಒಬ್ಬ ಹುಚ್ಚʼ; ಅಮೆರಿಕ ಅಧ್ಯಕ್ಷನ ವಿರುದ್ಧ ಸಿಡಿದೆದ್ದ ಲಕ್ಷಾಂತರ ಜನರು - hands off anti-trump thousands protested nationwide  budget cuts, tariffs - vijaykarnataka