Loading the player...


INFO:
ಪಾಕಿಸ್ತಾನದ ಪತ್ರಕರ್ತೆ ಮತ್ತು ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್, 'ಪಾಕಿಸ್ತಾನ ರಿಪಬ್ಲಿಕ್ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಾಕಿಸ್ತಾನದ ವಂಶಪಾರಂಪರ್ಯ ರಾಜಕಾರಣವನ್ನು ಕೊನೆಗೊಳಿಸಿ, ರಾಜಕೀಯವನ್ನು ಜನಸೇವೆಯಾಗಿ ಪರಿವರ್ತಿಸುವುದು ಮತ್ತು ಜನರ ಸಮಸ್ಯೆಗಳಿಗೆ ಆಡಳಿತಾರೂಢರನ್ನು ಹೊಣೆಗಾರರನ್ನಾಗಿಸುವುದು ತಮ್ಮ ಪಕ್ಷದ ಮುಖ್ಯ ಗುರಿ ಎಂದು ರೆಹಮ್‌ ಖಾನ್‌ ಘೋಷಿಸಿದ್ದಾರೆ. ಅಧಿಕಾರದಲ್ಲಿರುವ ಎಲ್ಲರನ್ನೂ ಬದಲಾಯಿಸುವ ಇರಾದೆಯೊಂದಿಗೆ ರಾಜಕೀಯ ಚಳುವಳಿ ಆರಂಭಿಸಿರುವುದಾಗಿ ರೆಹಮ್‌ ಖಾನ್‌ ನೀಡಿರುವ ಹೇಳಿಕೆ ಗಮನ ಸೆಳೆದಿದೆ.
ರೆಹಮ್‌ ಖಾನ್‌ ಪಾಕಿಸ್ತಾನ ರಿಪಬ್ಲಿಕ್‌ ಪಾರ್ಟಿ,Reham Khan: ಎಲ್ಲರನ್ನೂ ಅಧಿಕಾರದಿಂದ ಕೆಳಗಿಳಿಸುವ ವಾಗ್ದಾನ; ಪಾಕಿಸ್ತಾನ ರಿಪಬ್ಲಿಕ್‌ ಪಾರ್ಟಿ ಸ್ಥಾಪಿಸಿದ ಇಮ್ರಾನ್‌ ಖಾನ್‌ ಮಾಜಿ ಪತ್ನಿ! - imran khan ex wife reham khan launches pakistan republic party vows to end dynastic politics - vijaykarnataka