Loading the player...


INFO:
ಇಸ್ರೇಲ್ ಮತ್ತು ಇರಾನ್ ನಡುವೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಇಸ್ರೇಲ್ ಪ್ರದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಕದನ ವಿರಾಮವನ್ನು ಉಲ್ಲಂಘಿಸದಂತೆ ಉಭಯ ದೇಶಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಇಸ್ರೇಲ್‌ ದಾಳಿ ನಡೆಸದೇ ಇದ್ದರೆ ಕದನ ವಿರಾಮವನ್ನು ಒಪ್ಪಿಕೊಂಡಿರುವುದಾಗಿ ಇರಾನ್‌ ಹೇಳಿದೆ. ಇತ್ತ ಇಸ್ರೇಲ್‌ ಕೂಡ ಇದಕ್ಕೆ ಒಪ್ಪಿಕೊಂಡಿದೆ. ಈ ಮುನ್ನ ಟ್ರಂಪ್‌ ಭಾರತ-ಪಾಕ್‌ ಕದನ ವಿರಾಮದ ಕ್ರೆಡಿಟ್‌ ಪಡೆದಿದ್ದರು.
ಇಸ್ರೇಲ್‌- ಇರಾನ್‌ ಕದನ ವಿರಾಮ ಘೋಷಣೆ,ಇಸ್ರೇಲ್‌- ಇರಾನ್‌ ಕದನ ವಿರಾಮ ತಕ್ಷಣದಿಂದಲೇ ಜಾರಿ; ಟ್ರಂಪ್‌ ಘೋಷಣೆ ಬೆನ್ನಲ್ಲೇ ಯುದ್ಧ ನಿಲ್ಲಿಸಲು ಒಪ್ಪಿದ ಇರಾನ್‌ - israel iran war ceasefire now in effect do not violate it trump warns after attack - vijaykarnataka