Loading the player...


INFO:
ಸದಾ ಅಶಾಂತಿಯ ಗೂಡಾಗಿರುವ ಮಧ್ಯಪ್ರಾಚ್ಯ ದಿನಕ್ಕೊಂದು ಹೊಸ ವಿವಾದಗಳನ್ನು, ಹೊಸ ವಿಧ್ವಂಸಕ ಘಟನೆಗಳಿ ಸಾಕ್ಷಿಯಾಗುತ್ತಿರುತ್ತದೆ. ಅದರಂತೆ ಇಸ್ರೇಲ್‌ ಏಕಾಏಕಿ ಇರಾನ್‌ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ್ದು, ಇರಾನ್‌ ಪ್ರತಿದಾಳಿಗೆ ಸಿದ್ಧತೆ ಆರಂಭಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ "ಮಧ್ಯಪ್ರಾಚ್ಯ ಪ್ರದೇಶ ಶೀಘ್ರದಲ್ಲೇ ಅಪಾಯಕಾರಿ ಸ್ಥಳವಾಗಿ ಬದಲಾಗಲಿದೆ"‌ ಎಂದು ಹೇಳಿಕೆ ನೀಡಿ 24 ಗಂಟೆಯೊಳಗೆ ಇಸ್ರೇಲ್-ಇರಾನ್‌ ಯುದ್ಧಕ್ಕೆ ತೊಡೆ ತಟ್ಟಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.
ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ,ಇರಾನ್‌ ಮೇಲೆ ದಾಳಿ ಆರಂಭಿಸಿದ ಇಸ್ರೇಲ್;‌ ಡೊನಾಲ್ಡ್‌ ಟ್ರಂಪ್‌ ತುಕಡಿ ಸ್ಥಳಾಂತರ ಎಂದಾಗಲೇ ಅರ್ಥವಾಗಿತ್ತು ಖೇಲ್! - israel launches preemptive strikes against iran targets nuclear sites without us backing - vijaykarnataka