Loading the player...


INFO:
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕಾಶ್ಮೀರದ ಪ್ರವಾಸೋದ್ಯಮ ನಾಶಪಡಿಸುವ 'ಆರ್ಥಿಕ ಯುದ್ಧ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬಣ್ಣಿಸಿದ್ದಾರೆ. ಪಾಕಿಸ್ತಾನದೊಂದಿಗಿನ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಮಧ್ಯಸ್ಥಿಕೆಯ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಅದು ಸಂಪೂರ್ಣ ದ್ವಿಪಕ್ಷೀಯ ಎಂದು ಪ್ರತಿಪಾದಿಸಿದ್ದಾರೆ. ಭಾರತವು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಯಾವುದೇ ಒತ್ತಡವಿಲ್ಲದೆ ಸ್ವತಂತ್ರವಾಗಿ ಎದುರಿಸಲಿದೆ ಎಂದೂ ಜೈಶಂಕರ್‌ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ದೃಢಪಡಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತ-ಪಾಕ್‌ ಕದನ ವಿರಾಮ ದ್ವಿಪಕ್ಷೀಯ ಎಂದ ಜೈಶಂಕರ್‌,Operation Sindoor: ನಾನಲ್ಲೇ ಇದ್ದೆ; ಅಮೆರಿಕದ ನೆಲದಲ್ಲಿ ಭಾರತ-ಪಾಕ್‌ ಕದನ ವಿರಾಮ ಕ್ಷಣಗಳನ್ನು‌ ಬಿಚ್ಚಿಟ್ಟ ಜೈಶಂಕರ್ - jaishankar slams pahalgam attack as economic warfare rejects us role in bilateral ceasefire with pakistan - vijaykarnataka