Loading the player...


INFO:
ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ನಾಣ್ಣುಡಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಕ್ತ ವ್ಯಕ್ತಿ. ರಷ್ಯಾದೊಂದಿಗೆ ತೈಲ ಒಪ್ಪಂದ ಹೊಂದಿರುವ ಭಾರತದ ಮೇಲೆ ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸಿರುವುದಾಗಿ ಹೇಳಿರುವ ಟ್ರಂಪ್‌, ಅಸಲಿಗೆ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಕ್ರೆಡಿಟ್‌ ಪಡೆಯಲು ಇಷ್ಟೊಂದೆಲ್ಲಾ ನಾಟಕವಾಡುತ್ತಿದ್ದಾರೆ. ಇದಕ್ಕೆ ಅಮೆರಿಕ ಈ ವಿಚಾರವಾಗಿ ಪದೇ ಪದೇ ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿ. "ಭಾರತ-ಪಾಕ್‌ ಕದನ ವಿರಾಮ ಒಪ್ಪಂದದಲ್ಲಿ ಟ್ರಂಪ್‌ ನೇರ ಭಾಗಿಯಾಗಿದ್ದರು" ಎಂಬ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಭಾರತ-ಪಾಕ್‌ ಕದನ ವಿರಾಮದಲ್ಲಿ ಟ್ರಂಪ್‌ ನೇರ ಭಾಗಿ,ಟ್ರಂಪ್‌ಗೆ ರಷ್ಯಾ ಆಯಿಲ್‌ ಸಮಸ್ಯೆ ಅಲ್ಲ, ಭಾರತ-ಪಾಕ್‌ ಕದನ ವಿರಾಮ ಕ್ರೆಡಿಟ್‌ ಪಡೆಯುವ ತವಕ; ನಿಲ್ಲದು ʻನೇರ ಭಾಗಿಧಾರʼನ ನಾಟಕ! - not just russian oil donald trumps tariff on india to get credit on ceasefire with pakistan - vijaykarnataka