Loading the player...


INFO:
ತಮ್ಮ ಸುಂಕ ನೀತಿಯ ಪರ ಜನಾಭಿಪ್ರಾಯ ರೂಪಿಸಲು ಹರಸಾಹಸಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸುಂಕವನ್ನು ವಿರೋಧಿಸಿ ಅಮೆರಿಕದ ಫೆಡರಲ್‌ ಮೇಲ್ಮನವಿ ನ್ಯಾಯಾಲಯ ನೀಡಿರುವ ತೀರ್ಪನ್ನು ಸಾರ್ವಜನಿಕವಾಗಿ ಟೀಕಿಸಲಾರಂಭಿಸಿದ್ದಾರೆ. ಅಲ್ಲದೇ "ಒಂದು ವೇಳೆ ಸುಂಕಗಳನ್ನು ಹಿಂಪಡೆದರೆ, ಅಮೆರಿಕ ಮತ್ತು ಅಮೆರಿಕದ ಮಿಲಿಟರಿ ಶಕ್ತಿ ಸಂಪೂರ್ಣವಾಗಿ ಸರ್ವನಾಶವಾಗುತ್ತದೆ" ಎಂದು ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಫೆಡರಲ್‌ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿರುವಾಗಲೇ, ಟ್ರಂಪ್‌ ಅವರ ಈ ಎಚ್ಚರಿಕೆ ಹೇಳಿಕೆ ಗಮನ ಸೆಳೆದಿದೆ.
ಸುಂಕ ನೀತಿ ಪರ ಜನಾಭಿಪ್ರಾಯ ರೂಪಿಸಲು ಟ್ರಂಪ್‌ ಹರಸಾಹಸ,ಅಮೆರಿಕದ ಮಿಲಿಟರಿ ಶಕ್ತಿ ಸರ್ವನಾಶವಾಗುತ್ತೆ; ಸ್ವಂತ ಜನರನ್ನೇ ಹೆದರಿಸಲು ಆರಂಭಿಸಿದ ಸುಂಕಾಧ್ಯಕ್ಷ ಡೊನಾಲ್ಡ್‌ ಟ್ರಂಪ್‌! - our military power would be instantly obliterated donald trump blast out against federal court tariff ruling - vijaykarnataka