Loading the player...


INFO:
ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ಪ್ರಶ್ನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಮತ್ತು ರಷ್ಯಾ ಎರಡೂ ದೇಶದಿಂದ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಟ್ರಂಪ್‌ ಸುಂಕ ಬೆದರಿಕೆಗಳನ್ನು "ಅಸಮರ್ಥನೀಯ" ಎಂದು ಕರೆದಿರುವ ಭಾರತ, ರಷ್ಯಾದಿಂದ ತೈಲ ಖರೀದಿಸುವುದಾಗಿ ಸ್ಪಷ್ಟಪಡಿಸಿದೆ. ಇದೇ ವೇಳೆ ಭಾರತದ ಬೆಂಬಲಕ್ಕೆ ಧಾವಿಸಿರುವ ರಷ್ಯಾ, "ಸಾರ್ವಭೌಮ ರಾಷ್ಟ್ರಗಳು ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ" ಎಂದು ಹೇಳುವ ಮೂಲಕ ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ನೀಡಿದೆ.
ಭಾರತ ಬೆಂಬಲಿಸಿ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ ರಷ್ಯಾ,ಸಾರ್ವಭೌಮ ದೇಶದ ನಿರ್ಧಾರ ಪ್ರಶ್ನಿಸಲು ನೀವ್ಯಾರು? ಟ್ರಂಪ್‌ ಬೆದರಿಕೆ ನಡುವೆ ಭಾರತಕ್ಕೆ ರಷ್ಯಾ ಸಪೋರ್ಟ್ - russia backs inda amid donald trump tariff threat says wrong to question the decisions of sovereign nation - vijaykarnataka