Loading the player...


INFO:
ಮಹತ್ವದ ಬೆಳವಣಿಗೆಯೊಂದರಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪುಟಿನ್‌ ಅವರ ಭಾರತ ಪ್ರವಾಸ ಮಾಹಿತಿಯನ್ನು ಮಾಸ್ಕೋ ಶೀಘ್ರದಲ್ಲೇ ಹಂಚಿಕೊಳ್ಳಲಿದೆ. ಈ ಕುರಿತು ಮಾಸ್ಕೋ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮಾಹಿತಿ ನೀಡಿದ್ದು, "ಪುಟಿನ್‌ ಅವರ ಭಾರತ ಭೇಟಿ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದ ಮೇಲೆ ಅಮೆರಿಕದ ಸುಂಕ ಸಮರದ ಮಧ್ಯೆ, ರಷ್ಯಾ ಅಧ್ಯಕ್ಷರ ಭಾರತ ಭೇಟಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ವ್ಲಾಡಿಮಿರ್‌ ಪುಟಿನ್‌ ಭಾರತ ಪ್ರವಾಸ,ಭಾರತಕ್ಕೆ ಬರಲಿದ್ದಾರೆ ವ್ಲಾಡಿಮಿರ್‌ ಪುಟಿನ್: ಶೀಘ್ರದಲ್ಲೇ ಪ್ರವಾಸ ಮಾಹಿತಿ ಹಂಚಿಕೊಳ್ಳಲಿದೆ ಮಾಸ್ಕೋ - russia president vladimir putin to visit india soon moscow will announce tour details shortly - vijaykarnataka