Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ಸಿಖ್ ಸಮುದಾಯದ ಗುರುದ್ವಾರಗಳ ಮೇಲೂ ವಿಸ್ತರಿಸಿದ್ದಾರೆ. ವಲಸೆ ಇಲಾಖೆಯ ಅಧಿಕಾರಿಗಳು ಅಮೆರಿಕದ ಹಲವಾರು ಕಡೆಯಿರುವ ಗುರುದ್ವಾರಗಳಿಗೆ ಲಗ್ಗೆಯಿಟ್ಟು ತಪಾಸಣೆ ನಡೆಸಲಾರಂಭಿಸಿದ್ದಾರೆ. ಆದರೆ ಇದಕ್ಕೆ ಗುರುದ್ವಾರಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗುರುದ್ವಾರಗಳಲ್ಲಿ ನಡೆಯುತ್ತಿರುವ ತಪಾಸಣೆಗಳು ಅವರ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಸಿಖ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಅಲ್ಲಿನ ಮಾಧ್ಯಮಗಳು ಪ್ರಾರ್ಥನಾ ಮಂದಿರಗಳು ಅಕ್ರಮ ವಲಸಿಗರ ಸುರಕ್ಷಿತ ತಾಣವಾಗಿವೆ. ಹಾಗಾಗಿ, ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ಮಾಡಿವೆ.
Illegal Immigrants Face Action In Us,ಅಮೆರಿಕದ ಗುರುದ್ವಾರಗಳ ಮೇಲೆ ಟ್ರಂಪ್ ಅನುಮಾನ - ಸಿಖ್ ಸಮುದಾಯದ ಮೇಲೇಕೆ ಇದ್ದಕ್ಕಿದ್ದಂತೆ ಗುಮಾನಿ? - trump administration’s crackdown on illegal immigration 2025 - officials search in gurudwars belong us sikh community - vijaykarnataka