Loading the player...


INFO:
ಇರಾನ್ ಜೊತೆಗಿನ ಸಂಘರ್ಷ ಮುಗಿದ ಬೆನ್ನಲ್ಲೇ, ಇಸ್ರೇಲ್ ತನ್ನ ಗಮನವನ್ನು ಸಿರಿಯಾ ಕಡೆಗೆ ಹರಿಸಿದೆ. ರಾಜಧಾನಿ ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನ ಮತ್ತು ಸೇನಾ ಪ್ರಧಾನ ಕಚೇರಿ ಮೇಲೆ ವಾಯುದಾಳಿ ನಡೆಸಿದೆ. ಸಿರಿಯಾದಲ್ಲಿರುವ ಡ್ರೂಜ್ ಸಮುದಾಯದ ರಕ್ಷಣೆಗಾಗಿ ಈ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದ್ದು, ಇದು ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಈ ಮಧ್ಯೆ ಇಸ್ರೇಲ್‌ ದಾಳಿಯ ಬಗ್ಗೆ ವರದಿ ಬಿತ್ತರಿಸುತ್ತಿದ್ದ ಟಿವಿ ನಿರೂಪಕಿಯೋರ್ವಳು, ಮಾಧ್ಯಮ ಕಟ್ಟಡದ ಬಳಿ ಬಾಂಬ್‌ ಬಿದ್ದ ಪರಿಣಾಮ ಲೈವ್‌ ಕಾರ್ಯಕ್ರಮವನ್ನು ಬಿಟ್ಟು ಹೊರ ಓಡಿದ ಘಟನೆ ನಡೆದಿದೆ.
ಸಿರಿಯಾದ ಡಮಾಸ್ಕಸ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ,ದಣಿವರಿಯದ ಇಸ್ರೇಲ್‌ ಸೇನಾ ಪಡೆಗಳಿಂದ ಸಿರಿಯಾ ಮೇಲೆ ದಾಳಿ; ಲೈವ್‌ ಬಿಟ್ಟು ಓಡಿದ ನಿರೂಪಕಿ! ವಿಡಿಯೋ ವೈರಲ್ - tv anchor runs mid telecast after israel turns to syria with airstrikes on its capital - vijaykarnataka