Loading the player...


INFO:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯ ಬಗ್ಗೆ ಮಾತನಾಡಿದ್ದು, ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವುದು ಮತ್ತು ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಷ್ಟ್ರವು ಪರಮಾಣು ಬಾಂಬ್ ತಯಾರಿಸುವುದನ್ನು ತಡೆಯುವುದು ನಮ್ಮ ಗುರಿಯಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹಕಾರವನ್ನು ಟ್ರಂಪ್ ಶ್ಲಾಘಿಸಿದ್ದಾರೆ.
ಇರಾನ್‌ಗೆ ಮತ್ತೆ ವಾರ್ನಿಂಗ್‌ ಕೊಟ್ಟ ಟ್ರಂಪ್,'ಇನ್ನಾದರೂ ಇರಾನ್‌ ಶಾಂತಿ ಸ್ಥಾಪಿಸಲಿ, ಇಲ್ಲದಿದ್ರೆ ಭವಿಷ್ಯದ ದಾಳಿ ಭಾರಿ ಪ್ರಮಾಣದ್ದಾಗಿರುತ್ತೆ' ಎಂದು ಅಮೆರಿಕ ವಾರ್ನಿಂಗ್ - ಟ್ರಂಪ್‌ ಭಾಷಣದ ಹೈಲೈಟ್ಸ್‌ ಇಲ್ಲಿವೆ - us attack on iran we have stopped the worlds no 1 terrorist from developing a nuclear bomb here are highlights of trumps speech - vijaykarnataka