Loading the player...


INFO:
ಶ್ವೇತಭವನದ ಪ್ರಕಟಣೆಯಂತೆ, ಭಾರತ-ಅಮೆರಿಕ ನಡುವೆ ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದ ಜಾರಿಯಾಗಲಿದೆ. ವ್ಯಾಪಾರ ಒಪ್ಪಂದ ವಿಚಾರವಾಗಿ "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶೀಘ್ರದಲ್ಲೇ ಕರೆ ಮಾಡಲಿದ್ದಾರೆ" ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟಪಡಿಸಿದ್ದಾರೆ. ಇಂಡೋ-ಪೆಸಿಫಿಕ್‌ನಲ್ಲಿ ಭಾರತವನ್ನು ಪ್ರಮುಖ ಕಾರ್ಯತಂತ್ರದ ಮಿತ್ರರಾಷ್ಟ್ರವೆಂದು ಶ್ಲಾಘಿಸಿರುವ ಅಮೆರಿಕ, ಈ ಒಪ್ಪಂದ ಅಂತಿಮಗೊಳಿಸಲು ತೀವ್ರ ಉತ್ಸುಕತೆ ತೋರಿದೆ. ಇದು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸಲಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ,Trade Deal: ಶೀಘ್ರದಲ್ಲೇ ನರೇಂದ್ರ ಮೋದಿ ಅವರಿಗೆ ಡೊನಾಲ್ಡ್‌ ಟ್ರಂಪ್‌ ಕರೆ ಬರಲಿದೆ; ಶ್ವೇತಭವನ ಉತ್ಸುಕ! - us india trade deal imminent donald trump to call narendra modi soon white house announces - vijaykarnataka