Loading the player...


INFO:
ನಾನು ಮಾಡಿದ್ದೇ ಸರಿ ಎಂದು ಬೀಗುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಿ ಕೈಸುಟ್ಟುಕೊಂಡಿದ್ದಾರೆ. ಭಾರತದ ಮೇಲಿನ ಟ್ರಂಪ್‌ ಸುಂಕಗಳಿಗೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ಯುಎಸ್ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಸದಸ್ಯ ಗ್ರೆಗೊರಿ ಮೀಕ್ಸ್ ಅವರು, "ಭಾರತದ ಮೇಲಿನ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಕೋಪ ಅನಗತ್ಯ" ಎಂದು ಹೇಳಿದ್ದಾರೆ. ಅಲ್ಲದೇ "ಭಾರತ ಮತ್ತು ಅಮೆರಿಕದ ಸಂಬಂಧ ಸುಧಾರಣೆಗೆ, ಎರಡು ದಶಕಗಳ ಕಾಲ ನಡೆಸಿದ ಪ್ರಯತ್ನಗಳಿಗೆ ಅಪಾಯ ಎದುರಾಗಿದೆ" ಎಂದು ಮೀಕ್ಸ್‌ ಅಸಮಾಧಾನ ಹರೊಹಾಕಿದ್ದಾರೆ.
ಭಾರತದ ಮೇಲಿನ ಟ್ರಂಪ್‌ ಸುಂಕ ವಿರೋಧಿಸಿದ ಗ್ರೆಗೊರಿ ಮೀಕ್ಸ್,ದಶಕಗಳ ಪ್ರಯತ್ನ ನೀರಲ್ಲಿ ಹೋಮ; ಭಾರತದ ಮೇಲಿನ ಡೊನಾಲ್ಡ್‌ ಟ್ರಂಪ್‌ ಸುಂಕ ಕೋಪಕ್ಕೆ ಅಮೆರಿಕದಲ್ಲಿ ಆಂತರಿಕ ಭಿನ್ನಮತ! - us internal dissent mounts against donald trump for unnecessary tariffs on india - vijaykarnataka