Loading the player...


INFO:
ಹೊಸ ಸುಂಕ ನೀತಿಗಳನ್ನು ಜಾರಿಗೊಳಿಸಿ ಜಗತ್ತನ್ನು ತಲ್ಲಣಗೊಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ, ಅಮೆರಿಕದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯ ಭಾರೀ ಹೊಡೆತ ನೀಡಿದೆ. ಸುಂಕ ನೀತಿಗಳಿಗೆ ತಡೆಹಿಡಿದಿರುವ ನ್ಯಾಯಾಲಯ, "ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಸುಂಕ ನೀತಿಯನ್ನು ಜಾರಿಗೊಳಿಸಿದ್ದಾರೆ" ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ ಈ ಸುಂಕ ನೀತಿಯ ನೆರವಿನಿಂದಲೇ ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಳಿಸುವಲ್ಲಿ ಡೊನಾಲ್ಡ್‌ ಟ್ರಂಪ್‌ ಯಶಸ್ವಿಯಾಗಿದ್ದಾರೆ ಎಂಬ ವಾದವನ್ನೂ, ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯ ತಿರಸ್ಕರಿಸಿದೆ.
ಟ್ರಂಪ್‌ ಸುಂಕ ನೀತಿ ಅಸಿಂಧು ಎಂದ ಯುಎಸ್‌ ಕೋರ್ಟ್‌,ಡೊನಾಲ್ಡ್‌ ಟ್ರಂಪ್ ಸುಂಕ ನೀತಿಗೆ ತಡೆ, ಭಾರತ-ಪಾಕ್‌ ಕದನ ವಿರಾಮ ಕ್ರೆಡಿಟ್‌ ಬೇಡ ಎಂದ ಕೋರ್ಟ್! - us international trade court blocks donald trump tariffs and rejects india pakistan conflict credit - vijaykarnataka