Loading the player...


INFO:
ಇಸ್ರೇಲ್‌-ಇರಾನ್‌ ಸಂಘರ್ಷ ಮಧ್ಯಪ್ರಾಚ್ಯವನ್ನು ಹಿಂಡಿ ಹಿಪ್ಪೆ ಮಾಡಲಿದೆ ಎಂದು ಎಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬೇಷರತ್‌ ಶರಣಾಗತಿಯೊಂದೇ ಇರಾನ್‌ ಮುಂದಿರುವ ದಾರಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ರೂಥ್‌ ಸೋಶಿಯಲ್‌ ಮಿಡಿಯಾದಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, "ಇರಾನ್‌ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅಡಗಿರುವ ಬಂಕರ್‌ ಎಲ್ಲಿದೆ ಎಂಬುದು ನಮಗೆ ಗೊತ್ತಿದೆ" ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಟೋಟಲ್‌ ಸರೆಂಡರ್‌ ಅಷ್ಟೇ ಎಂದು ಮುಖ ತಿರುಗಿಸಿದ ಡೊನಾಲ್ಡ್‌ ಟ್ರಂಪ್;‌ ಖಮೇನಿ ಬಂಕರ್‌ ಅಡ್ರೆಸ್‌ ಕೂಡ ಗೊತ್ತಂತೆ! - us president donald trump urges iran for unconditional surrender in war with israel - vijaykarnataka